Why is Mannettina Amavasya Celebrated in North Karnataka? | Full Story | ಈ ಆಚರಣೆಯ ಹಿಂದಿನ ರಹಸ್ಯ

Kannada Cartoon Video 8 days ago

Opis

#mannettinaamavadse #mannettinaamavasevideo#latestuttarakarnatakamannettinavideo

ಉತ್ತರಕರ್ನಾಟಕದ ಜನರು 'ಮಣ್ಣೆತ್ತಿನ ಅಮಾವಾಸೆಯನ್ನು 'ಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಮಣ್ಣೆತ್ತಿನ ಅಮಾವಾಸ್ಯೆಯಂದು ರೈತರು ಹೊಲಕ್ಕೆ ಹೋಗಿ, ಜಿಗುಟಾಗಿರುವ ಮಣ್ಣನ್ನು ಮನೆಗೆ ತಂದು, ಮನೆಯಲ್ಲಿ ಮಣ್ಣಿನಿಂದ ಜೋಡಿ ಎತ್ತು ಮತ್ತು ಮತ್ತು ಗ್ಯಾಂದಲಿಯನ್ನು ಮಾಡುತ್ತಾರೆ. ಬಳಿಕ ಮಣ್ಣಿನ ಎತ್ತುಗಳಿಗೆ ಸಿಂಗಾರ ಮಾಡುತ್ತಾರೆ. ಕೆಲವರು ಬಣ್ಣ ಹಚ್ಚಿದರೆ, ಇನ್ನು ಕೆಲವರು ಅಲಂಕಾರಿಕ ವಸ್ತುಗಳನ್ನು ಹಚ್ಚಿ, ಅವುಗಳಿಗೆ ಸಿಂಗಾರ ಮಾಡುತ್ತಾರೆ. ನಂತರ ಮನೆಯ ದೇವರ ಕೋಣೆಯಲ್ಲಿಟ್ಟು ಅದನ್ನು ಪೂಜೆ ಮಾಡುತ್ತಾರೆ. ನಂತರ ಕೆಲವರು ಗ್ರಾಮದ ಹನಮಂತ ದೇವರು, ಗ್ರಾಮ ದೇವತೆಯ ದೇವಸ್ಥಾನಗಳಿಗೆ ಮಣ್ಣಿನ ಎತ್ತುಗಳನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಕೊಂಡು ಬರುತ್ತಾರೆ. ಪೂಜೆ ಮಾಡಿದ ನಂತರ ಮಣ್ಣಿನ ಎತ್ತುಗಳಿಗೆ, ಹೋಳಿಗೆ, ಕಡಬಿನಿಂದ ಮಾಡಿದ ಆಹಾರವನ್ನು ಎಡೆ ಇಡುತ್ತಾರೆ. ಬಳಿಕ ತಮ್ಮ ಮನೆಯ ಹಿತ್ತಲಲ್ಲಿ ಮತ್ತು ಜಮೀನಿನಲ್ಲಿ ಮಣ್ಣಿನ ಎತ್ತುಗಳನ್ನು ತೆಗೆದುಕೊಂಡು ಹೋಗಿ ಇಡುತ್ತಾರೆ.ಆ ಮೂಲಕ ಭೂ ತಾಯಿ ಮತ್ತು ಎತ್ತುಗಳು ನಮ್ಮನ್ನು ಕಾಪಾಡಿ ಎಂದು ಪ್ರಾರ್ಥನೆ ಮಾಡುತ್ತಾರೆ.ಒಟ್ಟಿನಲ್ಲಿ ಭೂಮಿತಾಯಿ ಮತ್ತು ಎತ್ತುಗಳಿಗೆ ಕೃತಜ್ಞತೆ ಸಲ್ಲಿಸಲು ಈ ಆಚರಣೆಯನ್ನು ಮಾಡಲಾಗುತ್ತದೆ